ಸಹ್ಯಾದ್ರಿ ಸುದ್ದಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

  ಕಂದಕಕ್ಕೆ ಉರುಳಿಬಿದ್ದ ಸೇನಾ ವಾಹನ:  ಕರ್ನಾಟಕದ ಮೂವರು ಯೋಧರು  ಹುತಾತ್ಮ

ಜಮ್ಮುಕಾಶ್ಮೀರ:  ಸೇನಾವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಯೋಧರು ಹುತಾತ್ಮರಾಗಿರುವ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ.

ಜಮ್ಮುಕಾಶ್ಮೀರದ ಮೆಂಧರ್ ಸೆಕ್ಟರ್ ನ ಪೂಂಚ್ ಜಿಲ್ಲೆಯ ಬಲ್ನೋಯಿ  ಬಳಿ ಈ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳದ ಮಹೇಶ್ ಮಾರಿಕೊಂಡ್, ಉಡುಪಿ ಜಿಲ್ಲೆ ಕುಂದಾಪುರದ ಅನೂಪ್, ಚಿಕ್ಕೋಡಿ ದಯಾನಂದ್ ಮೃತಪಟ್ಟ ಮೂವರು ಯೋಧರು.

ಕರ್ತವ್ಯಕ್ಕೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸೇನಾವಾಹನ 350 ಅಡಿ ಕಂದಕಕ್ಕೆ ಬಿದ್ದು ಈ ಘಟನೆ ಸಂಭವಿಸಿದೆ. ಹುತಾತ್ಮ ಅನೂಪ್ ಅವರು ಕಳೆದ 13 ವರ್ಷಗಳಿಂದ ಸೇನೆಯಲ್ಲಿದ್ದರು.  ಅವರಿಗೆ 2 ವರ್ಷದ ಪುಟ್ಟಮಗು ಇದೆ.

Related posts

ಭಾರತ ವಿಶ್ವಕಪ್ ಗೆದ್ದ ಬೆನ್ನಲ್ಲೇ ನಟ ದರ್ಶನ್ ಗೆ ನೆಟ್ಟಿಗರು ಧನ್ಯವಾದ ಹೇಳಿದ್ದೇಕೆ…?

Editor

ದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ..

Editor

ಪ್ರಜ್ವಲ್  ರೇವಣ್ಣ ಮತ್ತು ಹೆಚ್ ಡಿ ರೇವಣ್ಣಗೆ ಮತ್ತೊಂದು  ನೋಟಿಸ್: 24 ಗಂಟೆಯೊಳಗೆ ಹಾಜರಾಗುವಂತೆ ಸೂಚನೆ

Editor