ಸಹ್ಯಾದ್ರಿ ಸುದ್ದಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಗಡಿಪಾರು: ಮಹೇಶ್ ತಿಮರೋಡಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ದಕ್ಷಿಣ ಕನ್ನಡದಿಂದ ರಾಯಚೂರಿಗೆ ಹೋರಾಟಗಾರ ಮಹೇಶ್ ತಿಮರೋಡಿ ಅವರನ್ನ ಗಡಿಪಾರು ಮಾಡದ್ದ ಆದೇಶವನ್ನ ಸದ್ಯಕ್ಕೆ ಜಾರಿ ಮಾಡದಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಈ ಮೂಲಕ  ಮಹೇಶ್ ತಿಮರೋಡಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.  ಮಹೇಶ್ ತಿಮರೋಡಿ ಅವರು ಧರ್ಮಸ್ಥಳ ಪ್ರಕರಣ ಸಂಬಂಧ ಬುರುಡೆ ಚೆನ್ನಯ್ಯನಿಗೆ ಆಶ್ರಯ ನೀಡಿದ್ದರು. ಜೊತೆಗೆ ಅವರ ವಿರುದ್ದ 32 ಪ್ರಕರಣಗಳು ದಾಖಲಾಗಿದ್ದವು.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಮಹೇಶ್ ತಿಮರೋಡಿ ಅವರನ್ನ  ಗಡಿಪಾರು ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಮಹೇಶ್ ತಿಮರೋಡಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಹೇಶ್ ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ. ಸಧ್ಯಕ್ಕೆ ಗಡಿಪಾರು ಆದೇಶ ಜಾರಿಗೆ ತರದಂತೆ ಸೂಚಿಸಿದೆ. ಅಕ್ಟೋಬರ್ 8ರವರೆಗೆ ಮಹೇಶ್ ತಿಮರೋಡಿ ವಿರುದ್ಧ ಗಡಿಪಾರು ಆದೇಶ ಕೈಗೊಳ್ಳದಂತೆ ಹೈಕೋರ್ಟ್ ತಿಳಿಸಿದೆ.

 

Related posts

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಕಾಂಗ್ರೆಸ್ ದೂರು: ಬೆಂಗಳೂರಿನಲ್ಲಿ ಎಫ್ ಐಆರ್ ದಾಖಲು..

Editor

ಹೆಚ್ ಡಿಕೆ ಸ್ವಾರ್ಥ ದುರಾಸೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ- ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಸಿಪಿ ಯೋಗೇಶ್ವರ್ ಟಾಂಗ್

Editor

ರಾಮನ ಭಕ್ತರು ,  ಬಿಜೆಪಿ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿವಾರದವರಿಂದ. ದೇವಸ್ಥಾನಗಳ ಸ್ವಚ್ಛತಾ ಕಾರ್ಯ…

Editor