ಸಹ್ಯಾದ್ರಿ ಸುದ್ದಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಜಾತಿಗಣತಿ ಬಗ್ಗೆ  ಬಿಜೆಪಿ ಗೊಂದಲ ಸೃಷ್ಠಿಸುತ್ತಿದೆ: ಜನರಿಗೆ ನ್ಯಾಯ ಒದಗಿಸಲು ಸಮೀಕ್ಷೆ ಅಗತ್ಯ: – ಸಚಿವ ಕೃಷ್ಣಭೈರೇಗೌಡ

ಬೆಂಗಳೂರು:  ಜನರಿಗೆ ನ್ಯಾಯ ಒದಗಿಸಲು ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಗತ್ಯ. ಆದರೆ ಈ ವಿಚಾರದಲ್ಲಿ ಬಿಜೆಪಿ ಗೊಂದಲ ಸೃಷ್ಠಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುತ್ತಿದೆ. ಹಿಂದುಳಿದವರ ಸ್ಥಿತಿಗತಿ ತಿಳಿದು ಅವರಿಗೆ ಮೀಸಲಾತಿ ಸಿಗಲಿದೆ.  ಆದರೆ. ಬಿಜೆಪಿಗೆ ಜಾತಿಗಣತಿ ಇಷ್ಟವಿಲ್ಲ.   ಜಾತಿ ಗಣತಿ ಬಗ್ಗೆ ಯಾರಿಗೂ ಗೊಂದಲವಿಲ್ಲ. ಬಿಜೆಪಿಯವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದರು.

ಜಾತಿ ಬರೆಸುವುದು ಅವರ ವೈಯಕ್ತಿಕ ವಿಷಯ. ಜನರಿಗೆ ನ್ಯಾಯ ಕೊಡಿಸುವುದಕ್ಕೆ ಸಮೀಕ್ಷೆ ಆಗತ್ಯವಿದೆ ಯಾವುದೇ ಗೊಂದಲವಿದ್ದರೂ ಸರ್ಕಾರ ಬಗೆಹರಿಸುತ್ತೆ  ನಾನು ಕೂಡ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದೇನೆ. ಸಿಬ್ಬಂದಿಗೆ ಸಮಸ್ಯೆ ಇದ್ದರೆ ನಾವು ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Related posts

ಸೇವಾಮನೋಭಾವ ಮನುಷ್ಯನಿಗೆ ಮುಖ್ಯ:ಗುಣನಾಥಸ್ವಾಮೀಜಿ

Editor

ಇವರೇ ಭಾರತದ ಅತ್ಯಂತ ಕಿರಿಯ ಸಂಸದೆ…

Editor

210 ಕೋಟಿ ರೂ. ವೆಚ್ಚದಲ್ಲಿ ವಾಹನ ಬಿಡಿಭಾಗ ತಯಾರಿಕಾ ಘಟಕ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ

Editor