ಶಿವಮೊಗ್ಗ: ರಾಗಿ ಗುಡ್ಡದ ಬಹುತೇಕ ಎಲ್ಲಾ ಮನೆ ಅಂಗಡಿಗಳು ಒತ್ತುವರಿ ಮಾಡಿ ಚರಂಡಿಯ ನೀರು ಹೋಗದಂತೆ ವಾಹನ ಓಡಾಡಲು ತೊಂದರೆ ಮಾಡಿದವರನ್ನು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದ ರಾಗಿ ಗುಡ್ಡದಲ್ಲಿ ಬಹುತೇಕ ಮನೆಗಳು ಅಂಗಡಿಗಳು ಹೋಟೆಲ್ ಗಳು ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಪರವಾನಿಗೆ ಇಲ್ಲದೆ ನಗರಸಭೆ ಜಾಗವನ್ನು ಒತ್ತುವರಿ ಮಾಡಿ ಚರಂಡಿಯ ಮೇಲೆ ಮನೆ ಕಟ್ಟುವುದು ಇದರಿಂದ ಮಹಾನಗರ ಪಾಲಿಕೆಯವರು ಚರಂಡಿ ಸ್ವಚ್ಛತೆಯನ್ನು ಮಾಡದೆ ಸಾಂಕ್ರಾಮಿಕ ರೋಗಗಳಿಗೆ ಇಲ್ಲಿನ ಜನ ತುತ್ತಾಗುತ್ತಿದ್ದಾರೆ ಅಲ್ಲದೆ ತಮ್ಮ ಮನೆಯ ಮುಂದೆ ಹಾಕಿರುವ ಶೀಟ್ ಗಳು ರೋಡಿನ ತನಕ ವಿಸ್ತಾರ ಮಾಡಿಕೊಂಡಿರುವುದರಿಂದ ಕಸದ ಗಾಡಿಗಳು ಸಿಲೆಂಡರ್ ಗಾಡಿಗಳು ಅಲ್ಲದೆ ಯಾವುದೇ ವಾಹನಗಳು ಬರದೇ ರೀತಿಯಲ್ಲಿ ಇಲ್ಲಿನ ಜನರು ಮನೆಗೆ ಶೀಟ್ ಗಳನ್ನು ಅಳವಡಿಸಿರುತ್ತಾರೆ
ಮುಖ್ಯವಾಗಿ ರಾಗಿಗುಡ್ಡದ ನಾಲ್ಕನೇ ತಿರುಗು ಬಲಭಾಗದಲ್ಲಿ ಬಹುತೇಕ ಎಲ್ಲಾ ಮನೆಗಳು ಚರಂಡಿ ರಸ್ತೆ ಕಾಣದ ಹಾಗೆ ರಸ್ತೆಯನ್ನು ಕಳುಹಿಸಿಕೊಂಡಿದ್ದು ಇಲ್ಲಿನ ಜನರಿಗೆ ಓಡಾಡಲು ಇನ್ನಿತರ ಎಲ್ಲಾ ಕೆಲಸಗಳು ತೊಂದರೆ ಆಗಿರುತ್ತದೆ ಈ ಬಗ್ಗೆ ಹಲವಾರು ಬಾರಿ ಮಹಾನಗರ ಪಾಲಿಕೆಯ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದರು ಸಹ ಯಾವ ಅಧಿಕಾರಿಗಳು ಈ ಜಾಗಕ್ಕೆ ಬಂದು ಪರಿಚಲನೆ ಮಾಡಿರುವುದಿಲ್ಲ
ರಾಗಿ ಗುಡ್ಡದಲ್ಲಿ ಒತ್ತುವರಿ : ಕ್ರಮಕ್ಕೆ ಆಗ್ರಹ
ದಯಮಾಡಿ ಈ ಕೂಡಲೇ ಅನಧಿಕೃತವಾಗಿ ಚರಂಡಿ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಉತ್ತುವರಿ ಜಾಗವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಹಾಗೂ ಆರೋಗ್ಯಕರ ಜೀವನಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ಮತ್ತು ರಾಗಿಗುಡ್ಡ ನಿವಾಸಿಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮೂಲಕ ಎಚ್ಚರಿಸುತಿದ್ದೇವೆ ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ನಗರಾಧ್ಯಕ್ಷ ಜೀವನ ಡಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಾಲತೇಶ್ ಎನ್ ಯುವ ಘಟಕದ ಅಧ್ಯಕ್ಷ ಸಂತೋಷ್ ನಗರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಗ್ರಾಮಾಂತರ ಅಧ್ಯಕ್ಷ ಮಂಜುನಾಥ್ ಕಾರ್ಯದರ್ಶಿ ರಾಮು ರವಿ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು