ಸಹ್ಯಾದ್ರಿ ಸುದ್ದಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅಕ್ಷಯ ಸೊಸೈಟಿಗೆ 21 ಲಕ್ಷ ನಿವ್ವಳ ಲಾಭ: ಸುರೇಶ್‌ ಬಾಳೇಗುಂಡಿ

ಶಿವಮೊಗ್ಗ: ನಗರದ ಪ್ರತಿಷ್ಠಿತ ಅಕ್ಷಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವು  ಪ್ರಸಕ್ತ ಸಹಕಾರಿ ವರ್ಷದಲ್ಲಿ 21.32 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು  ಸಹಕಾರಿ ಅಧ್ಯಕ್ಷರಾದ ಸುರೇಶ್‌ ಕೆ.ಬಾಳೇಗುಂಡಿ ತಿಳಿಸಿದರು.

ಗೋಪಾಲಗೌಡ ಬಡಾವಭೆ ಔಷಧ ಭವನದಲ್ಲಿ ನಡೆದ ಸಂಘದ 13ನೇ  ಸರ್ವಸದಸ್ಯರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  20024 -25  ನೇ ಸಾಲಿನಲ್ಲಿ  ಹತ್ತು ಕೋಟಿಯಷ್ಟು ಠೇವಣಿಯನ್ನು ಸಹಕಾರಿಯು ಪಡೆದಿದ್ದು ಸುಮಾರು  ಹನ್ನೆರಡು  ಕೋಟಿ ದುಡಿಯುವ  ಬಂಡವಾಳವನ್ನು ಸಹಕಾರ ಸಂಘ ಹೊಂದಿದೆ.   ಎಲ್ಲಾ ಅರ್ಹ ಷೇರುದಾರಿಗೆ ಶೇಕಡ ಹತ್ತರಷ್ಟು ದಿವಿಡೆಂಟನ್ನು  ನೀಡಲಾಗುವುದು  ಎಂದು ಹೇಳಿದರು.
ಶೇಕಡ 98 ರಷ್ಟು ಸಾಲ ವಸೂಲಾತಿ ಯೊಂದಿಗೆ ಎ ಗ್ರೇಡ್ ಶ್ರೇಣಿಯ ಸಹಕಾರಿಯು ನಮ್ಮದಾಗಿರುತ್ತದೆ.  ಬದಲಾದ ಸಹಕಾರಿಯ ನಿಯಮಳಿಯಂತೆ ಎಲ್ಲಾ ಸದಸ್ಯರು ಕೂಡ ಕನಿಷ್ಠ ವ್ಯವಹಾರವನ್ನು ಅಂದರೆ ಸಹಕಾರಿಯಿಂದ ಸಾಲ ತೆಗೆದುಕೊಳ್ಳುವುದು ಸಹಕಾರಿ ಯಲ್ಲಿ ಹಣ ವಿನಿಯೋಗಿಸುವುದು ಮುಂತಾದ ವ್ಯವಹಾರವನ್ನು ಕಡ್ಡಾಯವಾಗಿ ಮಾಡಲೇಬೇಕು ತಪ್ಪಿದ್ದಲ್ಲಿ ಸಹಕಾರಿಯ ಚುನಾವಣೆಗೆ ನಿಲ್ಲುವ, ಸರ್ವ ಸದಸ್ಯ ಸಭೆಗೆ ಭಾಗವಹಿಸುವ ಅರ್ಹತೆಯನ್ನು ಸದಸ್ಯರು ಕಳೆದುಕೊಳ್ಳಬೇಕಾಗುತ್ತದೆ.  ಆದ್ದರಿಂದ ಎಲ್ಲಾ ಸದಸ್ಯರು ತಪ್ಪದೆ ಕನಿಷ್ಠ ವ್ಯವಹಾರ ಮಾಡುವಂತೆ ಸುರೇಶ್‌ ಬಾಳೇಗುಂಡಿ  ಕೋರಿದರು.
ಕುಮಾರಿ ಚೇತನಾರ  ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಸಹಕಾರಿಯ ಸಿ ಇ ಓ  ಆನಂದ್ ಅವರು ಕೋರಂ ಅನ್ನು ಘೋಷಣೆ ಮಾಡಿ ಕಳೆದ ಸಾಲಿನ  ಆದಾಯ ಮತ್ತು ಖರ್ಚನ್ನು ಸಭೆಗೆ ಮಂಡಿಸಿದರು. ಸಭೆಯು ಸಂಪೂರ್ಣ ಬೆಂಬಲದಿಂದ ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು. 2025-26 ನೇ ಸಾಲಿನ ಲೆಕ್ಕ ಪರಿಶೋಧಕರಾಗಿ  ಸಂತೋಷ್ ಕುಮಾರ್ ಆರ್ ಸಿಎ ಇವರನ್ನು ನೇಮಕ ಮಾಡಲು ಸಭೆ ಅನುಮೋದನೆ ನೀಡಿತು.   ಸಭೆಯಲ್ಲಿ ಒಬ್ಬ ವೈದ್ಯ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಪದವೀಧರರು ಹದಿಮೂರು ಪಿಯುಸಿ ವಿದ್ಯಾರ್ಥಿಗಳು 14 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಮಹಾ ಸಭೆಗೆ ಆಗಮಿಸಿದ ಷೇರುದಾರಾದ.ಪ್ರಭಾಕರ್, ಪುರದಾಳಿನ ಎಚ್ಎಂ ನಾಯ್ಕ್, ನಾಗರಾಜು ವಿ ಎಸ ಎಲ್, ಕೋದಂಡರಾಮ ಮ್ಯಾಮ್ ಕೋಸ್, ವೆಂಕಟೇಶ್ ಕೆನರಾ ಬ್ಯಾಂಕ್, ಆಂತೋನಿ ದಾಸ್  ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿದರು.  ಉಪಾಧ್ಯಕ್ಷರಾದ ಜಿ ಹೆಚ್ ಮಂಜುನಾಥ್  ವಂದನಾರ್ಪಣೆ ಮಾಡಿದರು. ನಿರ್ದೇಶಕರಾದ ರಾಮಲಿಂಗಪ್ಪ ಹೆಚ್ ಅವರು ಕಾರ್ಯಕ್ರಮ  ನಿರೂಪಿಸಿದರು. ಸಭೆಗೆ ಭಾಗವಹಿಸಿದ ಸದಸ್ಯರಿಗೆ ಬೋಜನ ವ್ಯವಸ್ಥೆ ಮಾಡಲಾಗಿತ್ತು.

Related posts

ಸಿಎಂ  ಸ್ಥಾನ ಅಲ್ಲಾಡುವ  ವೇಳೆ ಈ ರೀತಿ ಸಮಾವೇಶ ಮಾಡುತ್ತಾರೆ – ಬಿವೈ ವಿಜಯೇಂದ್ರ ಟೀಕೆ

Editor

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ರತ್ನ ದಿ. ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆ.

Editor

ಮುದ್ರಣ ಮಾಧ್ಯಮದಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಕಡ್ಡಾಯ

Editor