ಸಹ್ಯಾದ್ರಿ ಸುದ್ದಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಾವು ಬಳಸುವ ಟೀ ಪುಡಿ ಅಸಲಿಯೇ.. ನಕಲಿಯೇ .. ಪತ್ತೆ ಮಾಡೋದು ಹೇಗೆ ಗೊತ್ತೆ?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥ ವಸ್ತುಗಳಲ್ಲಿ ಕಲಬೆರಕೆ ಕಂಡು ಬರುತ್ತಿದೆ.  ಕಲಬೆರಕೆ ಪದಾರ್ಥಗಳ ಸೇವನೆಯಿಂದ ಆರೋಗ್ಯ ಕೆಡುತ್ತದೆ. ಈ ಬಗ್ಗೆ ತುಂಬಾ ಜಾಗೃತಿ ಅವಶ್ಯಕ. ಹಾಗೆಯೇ ಚಹಾ ಪುಡಿಯಲ್ಲಿ ತೆಂಗಿನಕಾಯಿಯ ಸಿಪ್ಪೆಯ ಪುಡಿ, ಮರದ ತೊಗಟೆಯ ಪುಡಿ, ಹುಣಸೆ ಬೀಜದ ಪುಡಿ ಸೇರಿದಂತೆ ಹೀಗೆ ರಾಸಾಯನಿಕ ಬೆರೆಸಿ ಕಲಬೆರಕೆಯುಕ್ತ ಚಹಾ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ನಕಲಿ ಟೀ ಪುಡಿಯಿಂದ ತಯಾರಿಸಿದ ಚಹಾ ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹೀಗಾಗಿ ಮನೆಯಲ್ಲೇ ಈ ರೀತಿ ನಕಲಿ ಚಹಾ ಪುಡಿಯನ್ನು ಪತ್ತೆ ಹಚ್ಚಬಹುದು.

ಕಲಬೆರಕೆ ಟೀ ಪುಡಿ ಪತ್ತೆ ಹಚ್ಚುವುದು ಹೀಗೆ…

ನೀರಿನಲ್ಲಿ ಪುಡಿ ಹಾಕಿ ಪರೀಕ್ಷಿಸುವ ಮೂಲಕ ಚಹಾ ಪುಡಿ ಅಸಲಿಯೇ ನಕಲಿಯೇ ಎಂದು ಕಂಡುಹಿಡಿಯಬಹುದು. ಮೊದಲು ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ಟೀ ಪುಡಿಯನ್ನು ಹಾಕಿ ಅದು ಬಣ್ಣ ಬಿಟ್ಟುಕೊಂಡರೆ ನಕಲಿಯಾಗಿರಬಹುದು. ಗಾಢ ಬಣ್ಣದ ಬಿಡದಿದ್ದರೆ ಅಸಲಿ ಎಂದರ್ಥ.

ಚಹಾ ಪುಡಿ ಅಸಲಿಯೇ ಎಂದು ಪತ್ತೆಹಚ್ಚಲು ಕುದಿಸಿದ ಚಹಾದ ಬಣ್ಣವನ್ನು ಗಮನಿಸಿ. ಚಹಾವು ಸೂಕ್ತವಾದ ಸ್ಪಷ್ಟವಾದ ಬಣ್ಣವನ್ನು ಹೊಂದಿದ್ದರೆ ಶುದ್ಧವಾಗಿದೆ ಎಂದರ್ಥ. ಒಂದು ವೇಳೆ ಕಲಬೆರಕೆಯಾಗಿದ್ದರೆ ಮಂದವಾದ ಅಥವಾ ಅಸ್ವಾಭಾವಿಕ ಬಣ್ಣವು ಕಲ್ಮಶಗಳನ್ನು ಸೂಚಿಸುತ್ತದೆ.

ಕಲಬೆರಕೆಯಲ್ಲದ ಚಹಾ ಪುಡಿಯಿಂದ ಮಾಡಿದ ಚಹಾವು ಸುವಾಸನೆಯುಕ್ತವಾಗಿದ್ದು ರುಚಿ ಉತ್ತಮವಾಗಿರುತ್ತದೆ. ಆದರೆ, ಚಹಾ ಪುಡಿಯೂ ಕಲಬೆರಕೆಯಾಗಿದ್ದರೆ ಕಹಿ ರುಚಿಯನ್ನು ಹೊಂದಿರುತ್ತದೆ.

ನೀವು ಬಳಸುವ ಚಹಾ ಪುಡಿ ಅಸಲಿಯೇ ಎಂದು ತಿಳಿಯಲು ಅದನ್ನು ಸೂಕ್ಷ್ಮವಾಗಿ ಗಮನಿಸಿ. ಬ್ರಾಂಡೆಡ್ ಟೀ ಪುಡಿ ಖರೀದಿಸಿದರೆ ಆ ಟೀ ಪುಡಿಯ ಕಣಗಳು ಹೆಚ್ಚಾಗಿ ಒಂದೇ ರೀತಿಯಿರುತ್ತದೆ. ಹಸಿರು ಹಸಿರಾದ ಟೀ ಪುಡಿಯ ಎಲೆಯ ಪುಡಿಯಿರುತ್ತದೆ. ಒಂದು ವೇಳೆ ಕಲಬೆರಕೆಯಾಗಿದ್ದರೆ ಟೀ ಪುಡಿಯ ಕಣಗಳು ಒಂದೊಂದು ಬಣ್ಣದಲ್ಲಿರಬಹುದು.

ಒಂದು ಸಣ್ಣ ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಟೀ ಪುಡಿಯನ್ನು ಸೇರಿಸಿ. ಅದು ಶುದ್ಧವಾಗಿದ್ದರೆ, ನೀರಿನಲ್ಲಿ ಬಹುತೇಕ ಕರಗಿ ಸಾಮಾನ್ಯ ಚಹಾ ಕಣಗಳು ಮಾತ್ರ ಕೆಳಭಾಗದಲ್ಲಿ ಉಳಿಯುತ್ತವೆ. ಒಂದು ಕಲಬೆರಕೆಯಾಗಿದ್ದರೆ ನೀರಿನಲ್ಲಿ ಕರಗದೇ ಮುದ್ದೆಯಾಗಿರುತ್ತದೆ. ಅದು ಶುದ್ಧ ಚಹಾ ಪುಡಿ ಆಗಿರುವುದಿಲ್ಲ.

 

Related posts

ಕೋವಿಡ್ ಬಳಿಕ ಹೃದಯಾಘಾತ ಹೆಚ್ಚಳ? ಡಾ. ಮಂಜುನಾಥ್ ಅವರ ಸಲಹೆಗಳಿವು..?

Editor

ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ವಚ್ಛತಾ  ಸೇವಾ ಅಭಿಯಾನ .

Editor

ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು- ಸಿಎಂ ಸಿದ್ದರಾಮಯ್ಯ ಕಿವಿಮಾತು

Editor