ಸಹ್ಯಾದ್ರಿ ಸುದ್ದಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪಿಂಜಾರ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ತಂಡ

ಶಿವಮೊಗ್ಗ: ದೇವರಾಜ ಅರಸು ಸಂಶೋಧನಾ ಸಂಸ್ಥೆಯಿಂದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಮಾನವ ಶಾಸ್ತ್ರ ಮತ್ತು ಸಮಾಜಶಾಸ್ತ್ರದ ವಿಭಾಗದಿಂದ ಪಿಂಜಾರ ಸಮುದಾಯದ ಕುಲಶಾಸ್ತ್ರ ಅಧ್ಯಯನವನ್ನು ಪ್ರಾಜೆಕ್ಟ್ ಡೈರೆಕ್ಟರ್ ಹಿರಿಯ ಪ್ರೊಫೆಸರ್ ಮಾನವ ಶಾಸ್ತ್ರದ ಮುಖ್ಯಸ್ಥ ಡಾ. ಟಿ.ಟಿ. ಬಸವನಗೌಡ ನೇತೃತ್ವದಲ್ಲಿ ಸಂಶೋಧನೆ ಮತ್ತು ಸಮೀಕ್ಷೆಯನ್ನು ನಡೆಸಿ ಸರ್ಕಾರಕ್ಕೆ ವರದಿಯನ್ನು ನೀಡಬೇಕೆಂಬ ಸರ್ಕಾರದ ಸೂಚನೆಯ ಮೇರೆಗೆ ಪಿಂಜಾರ ಜನಾಂಗದ ಕುಲಶಾಸ್ತ್ರ ಅಧ್ಯಯನಕ್ಕಾಗಿ ಶಿವಮೊಗ್ಗಕ್ಕೆ ತಂಡ ಆಗಮಿಸಿದೆ ಎಂದು ತಂಡದ ಟೀಮ್ ಲೀಡರ್ ಕೆ.ವಿ. ಮನೋಜ್ ಕುಮಾರ್ ತಿಳಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷ ಸಿ.ಎಂ. ಖಜೂರಿ, ಉಪಾಧ್ಯಕ್ಷ ಮೌಲಾಸಾಬ್, ರಾಗಿಗುಡ್ಡ ಕಾರ್ಯದರ್ಶಿ ರಜಾಕ್ ಸಾಬ್, ರಾಜ್ಯ ಸದಸ್ಯರಾದ ನಯಾಜ್ ಅಹಮದ್, ಗೌಸ್ ಫೀರ್ ಹಾಗೂ ಪದಾಧಿಕಾರಿಗಳು ತಂಡಕ್ಕೆ ಸಹಕಾರ ಮತ್ತು ಜೊತೆಯಲ್ಲಿದ್ದು, ಅಗತ್ಯ ಮಾಹಿತಿ ಒದಗಿಸಿರು.

ಪಿಂಜಾರ ಅಥವಾ ನದಾಫ್  ದೂದೆಕುಲ, ಸಮಾನಾಂತರ, ಜಾತಿಯ ಪದಗಳ ಹೆಸರಾಗಿದ್ದು, ಹಗ್ಗ, ಕಣ್ಣಿ ಕಾರ್ಮಿಕರಾಗಿ ಕುಲಕಸುವನ್ನು ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯದವರಿಗೆ ಪ್ರವರ್ಗ 1ರ ಅಡಿಯಲ್ಲಿ ಜಾತಿ ಸರ್ಟಿಫಿಕೇಟ್ ಅನ್ನು ಕೊಡುವುದು ಮುಖ್ಯ ಸಮಸ್ಯೆಯಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಮತ್ತು ಸಾಮಾಜಿಕವಾಗಿ ಜನಾಂಗದರ ಹಿಂದುಳಿದಿರುತ್ತಾರೆಂದು ಸರ್ಕಾರದಿಂದ ಅವಶ್ಯಕ ಸವಲತ್ತುಗಳು ಸಿಗದೇ ವಂಚಿತರಾಗಿರುತ್ತಾರೆಂದು ಸಂಘದ ಪದಾಧಿಕಾರಿಗಳು ಸಮೀಕ್ಷೆ ತಂಡದವರ ಗಮನಕ್ಕೆ ವಿಷಯವನ್ನು ತಂದರು.

ಕುಲಶಾಸ್ತ್ರ ಅಧ್ಯಯನವನ್ನು ಸಮಗ್ರವಾಗಿ ಸಮೀಕ್ಷೆಯನ್ನು ನಡೆಸಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಪೂರಕಾಂಶಗಳನ್ನು ಸೇರಿಸಿ ಸರ್ಕಾರವು ನಿಗದಿ ಪಡಿಸಿದ ಅವಧಿ ಒಳಗೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಕುಲಶಾಸ್ತ್ರ ಅಧ್ಯಯನದ ಮುಖ್ಯಸ್ಥ ಡಾ. ಟಿ.ಟಿ.ಬಸವನಗೌಡ ತಿಳಿಸಿದರು.

ರಜನಿ ಕೋ ಆರ್ಡಿನೇಟರ್ಸ್ ಮತ್ತು ಸಿಬ್ಬಂದಿಗಳಾದ ಅನಿಲ್ ಕುಮಾರ್, ಪ್ರದೀಪ್ ಕುಮಾರ್ ಮತ್ತು ಜಗದೀಶ್ ಅವರು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ಕೋಲಾರ, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಗದಗ ಕೊಪ್ಪಳ ಜಿಲ್ಲೆಗಳಲ್ಲಿ ಮತ್ತು ರಾಜ್ಯಾದ್ಯಂತ ಸಮೀಕ್ಷೆ ನಡೆಸಲಾಗುತ್ತೆ ಎಂದು ತಂಡದವರು ಸಭೆಯಲ್ಲಿ ತಿಳಿಸಿದರು.

Related posts

ವಾದ ಮಂಡನೆಗೆ ‘AI’ ವಕೀಲರ ರಚಿಸಿದ ವ್ಯಕ್ತಿ: ನ್ಯಾಯಾಧೀಶರೇ ಶಾಕ್

Editor

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ: ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ಎಸ್ ಪಿ ಶೇಷಾದ್ರಿ ಮನವಿ.

Editor

ಸನಾತನ ಹಿಂದೂ ಧರ್ಮ, ಜಗತ್ತಿನ ಧರ್ಮಗಳಲ್ಲಿಯೇ ಪುರಾತನವಾದದ್ದು- ಡಾ. ನಿರ್ಮಲಾ ನಂದನಾಥ ಮಹಾಸ್ವಾಮೀಜಿ

Editor