ಸಹ್ಯಾದ್ರಿ ಸುದ್ದಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು: 20 ದಿನಗಳಿಂದ ಪಾಕ್ ವಶದಲ್ಲಿದ್ದ `BSF’ ಯೋಧ ವಾಪಸ್

ನವದೆಹಲಿ:  ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ಜಯ ಸಿಕ್ಕಿದ್ದು, ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನ ಬಿಡುಗಡೆ ಮಾಡಿದೆ.

2025 ರ ಏಪ್ರಿಲ್ 23 ರಿಂದ ಪಾಕಿಸ್ತಾನ ರೇಂಜರ್ಸ್ ವಶದಲ್ಲಿದ್ದ ಬಿಎಸ್ಎಫ್  ಪೂರ್ಣಮ್ ಕುಮಾರ್ ಶಾ ಅವರನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿಎಸ್ಎಫ್ ಕಾನ್ಸ್ಟೆಬಲ್ ಆಕಸ್ಮಿಕವಾಗಿ ದಾಟಿಹೋಗಿದ್ದು ರಾಜತಾಂತ್ರಿಕ ಅಂತ್ಯವಾಗಿದೆ, ಪಾಕಿಸ್ತಾನ ರೇಂಜರ್ಗಳು ಭಾರತೀಯ ಪಡೆಗಳೊಂದಿಗಿನ ಎಲ್ಲಾ ಧ್ವಜ ಸಭೆಗಳನ್ನು ಸ್ಥಗಿತಗೊಳಿಸಿದ್ದು, ಕಳದ 20 ದಿನಗಳಿಂದ ಪಾಕ್ ವಶದಲ್ಲಿದ್ದ ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರು ಭಾರತಕ್ಕೆ ಮರಳಿದ್ದಾರೆ.

ಪಂಜಾಬ್ ನ ಫಿರೋಜ್ ಪುರದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅಂತರಾಷ್ಟ್ರೀಯ ಗಡಿ ದಾಟಿದ್ದು, ಇದೇ ವೇಳೆ ಪಾಕಿಸ್ತಾನ ರೇಂಜರ್ ಗಳು ಅವರನ್ನು ವಶಕ್ಕೆ ಪಡೆದಿದ್ದರು.  ಇದೀಗ ಅಟಾರಿ ಗಡಿ ಮೂಲಕ ಯೋಧ ಬಾರತಕ್ಕೆ ವಾಪಸ್ ಆಗಿದ್ದಾರೆ.

 

Related posts

ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಿಕೆ ನಾಣು ನೇಮಕ.

Editor

ಶಿಷ್ಟಚಾರ ಉಲ್ಲಂಘಿಸಿ ಬೈಪಾಸ್ ರಸ್ತೆ ಸೇತುವೆ ಉದ್ಘಾಟನೆ-ಕೆ.ಪಿ.ಸಿ.ಸಿ.ವಕ್ತಾರ ಆಯನೂರು ಮಂಜುನಾಥ್ ಆರೋಪ.

Editor

ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದ ಪೂಜೆ

Editor