ಬೆಂಗಳೂರು: ಚಳಿಗಾಲದಲ್ಲಿ ಬಹುತೇಕ ಎಲ್ಲರೂ ಬಿಸಿನೀರನ್ನ ಬಳಸುತ್ತಾರೆ. ಚುಮು ಚುಮು ಚಳಿಯನ್ನ ತಡೆಯಲು ಬೆಚ್ಚಗೆ ಇರಲು ಬಿಸಿನೀರನ್ನ ಹೆಚ್ಚಾಗಿ ಬಳಸಲಾಗುತ್ತದೆ. ಚಳಗಾಲದಲ್ಲಿ ತಣ್ಣೀರು ಮುಟ್ಟವುದೂ ಕಷ್ಟವಾಗಿರುತ್ತದೆ ಆದರೆ ನೀರು ಬಿಸಿಯಾಗಿದ್ದರೆ ಹಿತವೆನಿಸುತ್ತದೆ. ಆದರೆ ದೇಹಕ್ಕೆ ಹಿತವೆನಿಸುವ ಬಿಸಿ ನೀರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮುಖ ತೊಳೆಯುವಾಗ ಎಂದೂ ಬಿಸಿ, ಬಿಸಿ ನೀರನ್ನು ಬಳಸಬಾರದು. ನೀರು ತುಂಬಾ ತಣ್ಣಗೂ ಇರಬಾರದು. ತುಂಬಾ ಬಿಸಿಯಾಗಿಯೂ ಇರಬಾರದು. ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದ್ರೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಮುಖ ತೊಳೆಯುವಾಗ ಮುಖವನ್ನು ಸ್ಕ್ರಬ್ ಮಾಡ್ತಿರಿ ಎಂದಾದ್ರೆ ಮೃದು ಕೈಗಳಿಂದ ಸ್ಕ್ರಬ್ ಮಾಡಿ. ಒರಟಾದ ಕೈಗಳಿಂದ ಒರಟಾಗಿ ಮುಖವನ್ನು ತಿಕ್ಕಬೇಡಿ.
ಮುಖಕ್ಕೆ ಮೇಕಪ್ ಮಾಡಿಕೊಂಡಿದ್ದರೆ ಮೊದಲು ಕಾಟನ್ ಬಟ್ಟೆಯಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ನಂತ್ರ ಮುಖಕ್ಕೆ ನೀರು ಹಾಕಿ. ಮೇಕಪ್ ಇರುವಾಗ್ಲೆ ಮುಖಕ್ಕೆ ನೀರು ಹಾಕಿದ್ರೆ ಕೆಮಿಕಲ್ ಮುಖದ ಚರ್ಮ ಸೇರುತ್ತದೆ. ದಿನದಲ್ಲಿ ಎರಡು ಬಾರಿ ಮಾತ್ರ ಮುಖ ತೊಳೆಯಿರಿ. ಸೌಂದರ್ಯದ ಹೆಸರಿನಲ್ಲಿ ಪದೇ ಪದೇ ಮುಖ ತೊಳೆದ್ರೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ.
ಮುಖ ತೊಳೆಯುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕೊಳಕು ಕೈನಲ್ಲಿ ಮುಖ ತೊಳೆದ್ರೆ ಮುಖಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ.

