ಸಹ್ಯಾದ್ರಿ ಸುದ್ದಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸಿಲಿಂಡರ್ ದರ ಮತ್ತೆ ಹೆಚ್ಚಳ..

ಬೆಂಗಳೂರು: ದೇಶದಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ ಮತ್ತೆ ಏರಿಕೆಯಾಗಿದೆ.

ಹೌದು  ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 39ರೂ. ಹೆಚ್ಚಿಸಿವೆ. 14 ಕೆಜಿ ಗೃಹಬಳಕೆಯ ಗ್ಯಾಸ್​ ಸಿಲಿಂಡರ್​ನ ಬೆಲೆಗಳು ಯಥಾ ಸ್ಥಿತಿ ಕಾಯ್ದುಕೊಂಡಿವೆ.  ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 39ರೂ. ಹೆಚ್ಚಾಗಿದೆ.

ಸೆಪ್ಟೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ 1691.50 ರೂ.ಗೆ ಲಭ್ಯವಾಗಲಿದೆ. ಹೊಸ ದರಗಳ ಪ್ರಕಾರ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 39 ರೂ. ಈಗ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1691.50 ರೂ. IOCL ವೆಬ್‌ಸೈಟ್ ಪ್ರಕಾರ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳವು ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ.

ಮುಂಬೈನಲ್ಲಿ ಇದರ ಬೆಲೆ 1644 ರೂ. ಈ ಮೊದಲು ಈ ಸಿಲಿಂಡರ್ ಮುಂಬೈನಲ್ಲಿ 1605 ರೂ.ಗೆ ಲಭ್ಯವಿತ್ತು. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ 1764.50 ರೂ.ನಿಂದ 1802.50 ರೂ.ಗೆ ಏರಿಕೆಯಾಗಿದೆ. ಆದರೆ ಚೆನ್ನೈನಲ್ಲಿ ಈ ಸಿಲಿಂಡರ್ ಈಗ 1855 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 1817 ರೂ.ಗೆ ಮಾರಾಟವಾಗಿತ್ತು.

ಆಗಸ್ಟ್‌ನಲ್ಲಿ ಎಲ್‌ಪಿಜಿ ಗ್ಯಾಸ್‌ನ ಬೆಲೆಯನ್ನು ಹೆಚ್ಚಿಸಲಾಗಿತ್ತು  ಆಗ ಕಂಪನಿಗಳು 8.50 ರೂಪಾಯಿ ಏರಿಕೆ ಮಾಡಿದ್ದವು ಆದರೆ ಈ ಬಾರಿ ನೇರವಾಗಿ 39 ರೂಪಾಯಿ ಹೆಚ್ಚಿಸಿವೆ.

ಜುಲೈನಲ್ಲಿ ಪ್ರತಿ ಸಿಲಿಂಡರ್‌ ಗೆ 30 ರೂ., ಜೂನ್‌ನಲ್ಲಿ 69.50 ಮತ್ತು ಮೇನಲ್ಲಿ 19 ರೂ. ಹೆಚ್ಚಳ ಮಾಡಲಾಗಿತ್ತು. ಎಲ್‌ಪಿಜಿ ಬೆಲೆಗಳಲ್ಲಿನ ಹಠಾತ್ ಹೆಚ್ಚಳವು ರೆಸ್ಟೋರೆಂಟ್‌ ಗಳು ಮತ್ತು ಹೋಟೆಲ್‌ಗಳಿಂದ ಹಿಡಿದು ಸಣ್ಣ-ಪ್ರಮಾಣದ ಕೈಗಾರಿಕೆಗಳವರೆಗೆ ವಿವಿಧ ವಲಯಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು.

 

Related posts

ಯಾರು ತಿಪ್ಪರಲಾಗ ಹೊಡೆದರೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ-ಸಚಿವ ಮಧುಬಂಗಾರಪ್ಪ

Editor

024 ಮಾರ್ಚ್ 31ರೊಳಗೆ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಲು ತೀರ್ಮಾನ- ಶಾಸಕ ಚೆನ್ನಬಸಪ್ಪ.

Editor

ಸೂಡಾನ್ ತೆರಳಿದ್ದ ವ್ಯಕ್ತಿ ನಾಪತ್ತೆ: ಹುಡುಕಿಕೊಡುವಂತೆ ಕುಟುಂಬಸ್ಥರಿಂದ ಮನವಿ.

Editor