ಸಹ್ಯಾದ್ರಿ ಸುದ್ದಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಶಾಲೆಗಳಲ್ಲಿ ಶಿಕ್ಷಕರೂ ಸಹ ಮೊಬೈಲ್ ಫೋನ್ ಬಳಸುವಂತಿಲ್ಲ.

ಅಮರಾವತಿ: ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸದಂತೆ  ಎಲ್ಲಡೆ ನಿರ್ಬಂಧವಿದೆ. ಈ ಮಧ್ಯೆ ಆಂಧ್ರ ಪ್ರದೇಶ ರಾಜ್ಯದಲ್ಲಿ ಶಾಲೆಗಳಲ್ಲಿ ಶಿಕ್ಷಕರೂ ಸಹ ಮೊಬೈಲ್ ಫೋನ್ ಬಳಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.

ಹೌದು ಆಂಧ್ರ  ಸರ್ಕಾರ ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನ ನಿಷೇಧಿಸಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರುವುದನ್ನ ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅಲ್ಲದೇ ತರಗತಿಗಳಲ್ಲಿ ಶಿಕ್ಷಕರೂ ಸಹ ಮೊಬೈಲ್ ಫೋನ್ ಬಳಸುವುದನ್ನ ಶಿಕ್ಷಣ ಇಲಾಖೆ ನಿರ್ಬಂಧಿಸಿದೆ. ತರಗತಿಗಳಿಗೆ ಹೋಗುವ ಮುನ್ನ ಶಿಕ್ಷಕರು ತಮ್ಮ ಮೊಬೈಲ್ ಗಳನ್ನು ಮುಖ್ಯ ಶಿಕ್ಷಕರ ಬಳಿ ಕೊಟ್ಟು ಹೋಗಬೇಕು ಎಂದು ಸೂಚಿಸಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ವರದಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಶಿಕ್ಷಕರಿಂದ ಮಕ್ಕಳಿಗೆ ಉಂಟಾಗುವ ತೊಂದರೆ ತಪ್ಪಿಸಲು ಶಿಕ್ಷಕರೂ ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನ ನಿಷೇಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಯು ಶಾಲೆಗಳಲ್ಲಿ ಫೋನ್ ಬಳಕೆಯನ್ನ ನಿಷೇಧಿಸಿದೆ. ಡೇಟಾ ಗೌಪ್ಯತೆ, ಸುರಕ್ಷತೆ ಮತ್ತು ಮಗುವಿನ ಯೋಗಕ್ಷೇಮ ಕಾಳಜಿಯಿಂದ ಜಾಗತೀಕವಾಗಿ ನಾಲ್ಕು ದೇಶಗಳಲ್ಲಿ ಈ ಕ್ರಮ ಅನುಷ್ಠಾನಕ್ಕೆ ಬಂದಿದೆ. ಇದನ್ನ ಮಾದರಿಯಾಗಿ ತೆಗೆದುಕೊಂಡಿರುವ ಶಿಕ್ಷಣ ಇಲಾಖೆ ಆಂಧ್ರ ಪ್ರದೇಶದ ಶಾಲೆಗಳಲ್ಲಿಯೂ ಮೊಬೈಲ್ ಬಳಕೆಗೆ ನಿಷೇಧ ಹೇರಿದೆ.

 

Related posts

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ : ದ್ವಿಶತಕ ದಾಟಿದ ಬಿಜೆಪಿ ನೇತೃತ್ವದ ಮಹಾಯುತಿ: ಭರ್ಜರಿ ಮುನ್ನಡೆ

Editor

7 ಬಾರಿ ಸಂಚಾರ ನಿಯಮ ಉಲ್ಲಂಘನೆ: ಸಿಎಂ ಸಿದ್ದರಾಮಯ್ಯರಿಗೂ ಬಿತ್ತು ಫೈನ್

Editor

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಭಾಗಿ

Editor