ಇಂಗ್ಲೆಂಡ್: ಕಳೆದ 14 ವರ್ಷಗಳಿಂದ ಯುಕೆ ಅನೇಕ ಪ್ರಧಾನಿಗಳು ಬದಲಾಗಿದ್ದಾರೆ. ಆದರೆ ಡೌನಿಂಗ್ ಸ್ಟ್ರೀಟ್‌ನಲ್ಲಿ ಬೆಕ್ಕು ಮಾತ್ರ ಬದಲಾಗಿಲ್ಲ.
ಲ್ಯಾರಿ ಎನ್ನುವ ಬೆಕ್ಕು ಡೌನಿಂಗ್ ಸ್ಟ್ರೀಟ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದೆ. ಸುನಕ್ ನಂತರ ಈಗ ಕಿಯರ್ ಸ್ಟಾರ್‌ಮರ್ ಲೇಬರ್ ಪಾರ್ಟಿಯಿಂದ ವಿಜಯ ಸಾಧಿಸಿದ್ದು ಈ ಬೆಕ್ಕು ಹೊಸ ಪ್ರಧಾನಿಯ ಎದುರು ನೋಡುತ್ತಿದೆ.
ಯುನೈಟೆಡ್ ಕಿಂಗ್‌ಡಮ್ ಚುನಾವಣೆಯಲ್ಲಿ 14 ವರ್ಷಗಳಿಂದ ಕನ್ಸರ್ವೇಟಿವ್ ಪಕ್ಷದಲ್ಲಿದ್ದ ಅಧಿಕಾರವು ಲೇಬರ್ ಪಾರ್ಟಿಗೆ ದೊರಕಿದೆ. ಆದರೆ ಡೌನಿಂಗ್ ಸ್ಟ್ರೀಟ್‌ನಲ್ಲಿ ಈ ಬೆಕ್ಕುರಾಯ ಲ್ಯಾರಿ ಮಾತ್ರ ಇಲ್ಲೇ ಖಾಯಂ ಸ್ಥಾನ ಪಡೆದಿದ್ದಾನೆ.
VIDEO: Britain's true ruler? Larry, the Downing Street cat.
There has been one figure of stability in the last 14 years of political turmoil in the UK — Larry, the Downing Street cat and Chief Mouser to the Cabinet Office. The ageing tabby could be in line for his sixth prime… pic.twitter.com/whBIEz0MdQ
— AFP News Agency (@AFP) July 5, 2024
ಲ್ಯಾರಿ ಹುಟ್ಟಿದ್ದು 2007ರಲ್ಲಿ. ಅಂದಿನಿಂದ ಇಂದಿನವರೆಗೂ ಇವನ ಆವಾಸಸ್ಥಾನ ಪ್ರಧಾನಿಯ ಡೌನಿಂಗ್ ಸ್ಟ್ರೀಟ್‌ನ ನಿವಾಸ. ಈ ಬೆಕ್ಕಿಗೆ 2011ರಲ್ಲಿ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಕ್ಯಾಬಿನೆಟ್ ಕಚೇರಿಯ ಚೀಫ್ ಮೌಸರ್ ಅಂದರೆ ಇಲಿ ಹಿಡಿಯುವ ಕೆಲಸವನ್ನೂ ನೀಡಿದ್ದಾರೆ.
ಲ್ಯಾರಿ ಐವರು ಪ್ರಧಾನ ಮಂತ್ರಿಗಳನ್ನು ಕಂಡಿದ್ದು, ಎಲ್ಲರೂ ಕನ್ಸರ್ವೇಟಿವ್ ಪಕ್ಷದವರಾಗಿದ್ದರು. ಇದೀಗ 6ನೇ ಪ್ರಧಾನಿಯ ಕೆಳಗೆ ಕೆಲಸ ಮಾಡಲು ಲ್ಯಾರಿ ಸಿದ್ಧನಾಗಿದ್ದಾನೆ.
ಸುದ್ದಿ ಕೃಪೆ:ನವಸಮಾಜ ನ್ಯೂಸ್ ಹಬ್…

