ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಮಹಾನಗರಪಾಲಿಕೆ, ಶಿವಮೊಗ್ಗ ಸಹಭಾಗಿತ್ವದೊಂದಿಗೆ ಪ್ರತಿ ವರ್ಷದಂತೆ ಮೂರು ದಿನಗಳ ಕಾಲ “ಉದ್ದಿಮೆ ಪರವಾನಿಗೆ” (ಟ್ರೇಡ್ ಲೈಸೆನ್ಸ್) ನೀಡುವ ಬೃಹತ್ ಮೇಳವನ್ನು ಆಯೋಜಿಸಲಾಗಿದೆ.
ಉದ್ದಿಮೆ ಪರವಾನಗಿಯನ್ನು ಪಡೆದುಕೊಳ್ಳಲು ಉದ್ದಿಮೆದಾರರಿಗೆ ಅನುಕೂಲವಾಗುವ ನೆಲೆಯಲ್ಲಿ ಮಹಾನಗರಪಾಲಿಕೆಯಿಂದ ಸರಳೀಕೃತಗೊಳಿಸಿದ್ದು, ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ಪ್ರತಿಯೊಬ್ಬ ಉದ್ದಿಮೆದಾರರು, ವರ್ತಕರು ಪರವಾನಗಿ ಪಡೆಯುವುದಲ್ಲದೆ ತಮ್ಮ ಅಕ್ಕಪಕ್ಕದ ವ್ಯಾಪರಸ್ಥರಿಗೆ ಮಾಹಿತಿ ನೀಡಿ “ಟ್ರೇಡ್ ಲೈಸೆನ್ಸ್” ಪಡೆದುಕೊಳ್ಳಲು ಕೋರಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬೃಹತ್ ಮೇಳವನ್ನು ಮೂರು ದಿನಗಳ ಕಾಲ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಮಾನ್ಯ ಸದಸ್ಯರು ನಗರದ ಉದ್ದಿಮೆದಾರರು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯದರ್ಶಿ ಎ.ಎಂ. ಸುರೇಶ್‍ರವರು ಸಂಘದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉದ್ದಿಮೆ ಪರವಾನಗಿ ನಮೂನೆಯೊಂದಿಗೆ ನವೀಕರಿಸಲು ಕಳೆದ ವರ್ಷದ 1) ಲೈಸೆನ್ಸ್ ಪ್ರತಿ, 2)ಪಾನ್‍ಕಾರ್ಡ್ ಪ್ರತಿ, 3) ಮೊಬೈಲ್ ನಂಬರ್ ಮತ್ತು ಹೊಸದಾಗಿ ಪರವಾನಗಿ ಪಡೆಯುವವರು ಈ ಕೆಳಕಾಣಿಸಿದ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಪರವಾನಗಿ ಪಡೆಯಲು ಕೋರಲಾಗಿದೆ.
1. ಅರ್ಜಿದಾರರ ಪಾಸ್‍ಪೋರ್ಟ್ ಭಾವಚಿತ್ರ, 2. ಮುನಿಸಿಪಲ್ ಖಾತಾ ನಕಲು/ಪಹಣೆ/ಬಾಡಿಗೆ ಕರಾರು 4. ಆಧಾರ್ ಕಾರ್ಡ್ 5. ವಿದ್ಯುಚ್ಛಕ್ತಿ ಬಿಲ್ 6. ಮೊಬೈಲ್ ನಂಬರ್ 7. ಪಾನ್‍ಕಾರ್ಡ್ 8. ಇ-ಮೇಲ್ ಐಡಿ.