ಸಹ್ಯಾದ್ರಿ ಸುದ್ದಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮತಗಳ್ಳತನದ ದರೋಡೆಯ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿರುವ ಬಿಜೆಪಿ-ಮಯೂರ್ ಜಯ್ ಕುಮಾರ್ ವಾಗ್ದಾಳಿ

ಶಿವಮೊಗ್ಗ : ಮತಗಳ್ಳತನದ ದರೋಡೆಯ ಮೂಲಕ ಬಿಜೆಪಿ ಪಕ್ಷವು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯ್ ಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಆರಂಭಿಸಿರುವ `ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಇಂದು ನಗರದ ಆರ್.ಎಂ.ಎಲ್. ನಗರ ಟೆಂಪೆÇೀ ಸ್ಟ್ಯಾಂಡ್ ಹತ್ತಿರ ಜಿಲ್ಲಾ ಕಾಂಗ್ರೇಸ್ ಸಮಿತಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿಅವರು ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ. ಆ ಕಾರಣದಿಂದಲೇ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಚ್ಚು ಸ್ಥಾನ ಪಡೆಲಾಯಿತಲ್ಲದೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ದೂರಿದ ಅವರು, ಇದರ ಕಾಂಗ್ರೆಸ್ ಕಾರ್ಯಕರ್ತರು ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಕರ್ನಾಟಕದ ಮಹಾದೇವಪುರ ಕ್ಷೇತ್ರವೊಂದರಲ್ಲೇ 1.6 ಲಕ್ಷ ಮತಗಳ್ಳತನವಾಗಿದೆ. ಕೇಂದ್ರ ಚುನಾವಣಾ ಅಯೋಗ ಬಿಜೆಪಿಕೈಗೊಂಬೆಯಾಗಿದೆ. ನಮ್ಮ ನಾಯಕ ರಾಹುಲ್ ಗಾಂಧಿಅವರು ಆರುತಿಂಗಳ ಕಾಲ ಶ್ರಮಪಟ್ಟು, ಈವೋಟ್ ಚೋರಿಯನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ. 10#10 ಮನೆಯಲ್ಲಿ 84 ಮತಗಳು ನೋಂದಣಿಯಾಗಿದೆ. ಆ ಮನೆಬಿಜೆಪಿ ನಾಯಕರಿಗೆ ಸೇರಿದ್ದು, ಇನ್ನು ಅದೇ ಕ್ಷೇತ್ರದಲ್ಲಿ ನಾಲ್ಕುಸಾವಿರ ಮತದಾರರಿಗೆ ಅಡ್ರೆಸ್ ಮತ್ತು ಗುರುತಿನಪತ್ರ ಇರಲಿಲ್ಲ. ಒಟ್ಟಾರೆಯಾಗಿಕೇಂದ್ರ ಚುನಾವಣಾಆಯೋಗದ ನೆರವಿನೊಂದಿಗೆ ಬಿಜೆಪಿ ಮೋಸದ ಚುನಾವಣೆ ನಡೆಸಿದೆಎಂದು ದೂರಿದರು.
ಕಾಂಗ್ರೆಸ್ ಮತಬ್ಯಾಂಕ್ ಇರುವ ಏರಿಯಾಗಳಲ್ಲಿ ಅವರ ಮತಗಳನ್ನು ಬೇರೆ ಬಡಾವಣೆಗೆ ವರ್ಗಾವಣೆ ಮಾಡಲಾಗಿದೆ.ಆ ಜಾಗಕ್ಕೆ ಬಿಜೆಪಿ ಮತದಾರರನ್ನು ಸೇರಿಸಲಾಗಿದೆ. ಲೋಪದೋಷಗಳ ಬಗ್ಗೆ ಆರು ತಿಂಗಳೊಳಗೆ ದೂರು ನೀಡಬೇಕು ಎಂದು ಚುನಾವಣಾ ಹೇಳುತ್ತಿದೆ.ಆರು ತಿಂಗಳೊಳಗೆ ಡಿಜಿಟಲ್‍ಕಾಫಿಹಾಗೂ ಫಾರ್ಮ್ ನಂಬರ್ 17 ಸಿ ಪ್ರತಿ ಬೂತ್ ಅಧಿಕಾರಿಗಳ ಬಳಿಯಲ್ಲಿದ್ದು, ಅದನ್ನುಕೇಳಿದರೆ ಅದು ಡಿಲಿಟ್ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದರು.
ಬಿಹಾರದಲ್ಲಿ 65 ಲಕ್ಷ ಮತಗಳನ್ನು ಡಿಲಿಟ್ ಮಾಡಲಾಗಿದೆ. ಹರಿಯಾಣದಲ್ಲೂ ಭಾರೀ ಪ್ರಮಾಣದ ಮತಗಳನ್ನುತೆಗೆದು ಹಾಕಲಾಗಿದೆ.ಆಜಾಗಕ್ಕೆ ಬಿಜೆಪಿಪರವಾದ ಮತದಾರರನ್ನು ಸೇರಿಸಲಾಗಿದೆ.ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಿದ್ದ ಕಡೆಗಳಲ್ಲಿ ಗೆಲುವಿನ ಅಂತರ ಒಂದು ಅಥವಾ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಾಯಿತು. ಇದರ ಹಿಂದೆ ಮತಗಳ್ಳತನದ ದರೋಡೆ ನಡೆದಿದೆ. ರಾಜ್ಯ ಚುನಾವಣಾ ಅಯೋಗವೂ ಕೇಂದ್ರ ಚುನಾವಣಾ ಅಯೋಗದ ಸೂಚನೆಯಂತೆ ನಡೆಯುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಸಹಿ ಸಂಗ್ರಹದ ಗುರಿ ಕೊಟ್ಟಿದ್ದಾರೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಬೀದಿಬೀದಿಗೂ ಹೋಗಿ ಮತಗಳ್ಳತನ ಮಾಡಿದ ಕೇಂದ್ರ ಸರ್ಕಾರದ ವಿರುದ್ದ ಪ್ರಚಾರ ಮಾಡಲಾಗುವುದು, ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಜನರು ಕೂಡ ತಮ್ಮ ವಾಸದ ಜಾಗದಲ್ಲಿ ತಮ್ಮ ಮತ ಇದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಬೇಕಿದೆ. ನಿಮ್ಮ ಬೀದಿಯಲ್ಲಿ ವಾಸವಿಲ್ಲದವರ ಮತಗಳು ಇದ್ದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾಬಂಡಿ ಮಾತನಾಡಿ, ಬಿಜೆಪಿ ಮೋಸದ ಜಾಲವನ್ನು ಬಹಿರಂಗ ಪಡಿಸಬೇಕು, ನಿರೀಕ್ಷೆಗೂಮೀರಿ ಚುನಾವಣಾ ಆಯೋಗ ಬಿಜೆಪಿ ಸರ್ಕಾರದೊಂದಿಗೆ ಶಾಮೀಲಾಗಿದೆ. ಬಿಜೆಪಿ ವೋಟ್ ಚೋರಿಯನ್ನು ಮನೆಮನೆ ಗಳಲ್ಲೂ ಪ್ರಚಾರ ಮಾಡಬೇಕಿದೆ. ಅಂಬೇಡ್ಕರ್ ಅವರು ನೀಡಿದ ಸಮಾನತೆ ಸಂವಿಧಾನವನ್ನು ಉಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಲ್ಕೀಶ್‍ಬಾನು, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ರಮೇಶ್ ಶಂಕರಘಟ್ಟ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಂಪಾಷಾ, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಎನ್. ರಮೇಶ್, ಹೆಚ್.ಸಿ. ಯೋಗೀಶ್, ಶಿವುಕುಮಾರ್, ಶರತ್ ಮರಿಯಪ್ಪ, ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಆರ್. ರಾಜಶೇಖರ್, ವಿಜಯಲಕ್ಷ್ಮೀ ಪಾಟೀಲ್, ಪಿ.ಎಸ್. ಗಿರೀಶ್‍ರಾವ್, ದಿನೇಶ್ ಪಟೇಲ್, ಎಸ್.ಟಿ. ಚಂದ್ರಶೇಖರ್, ಹೆಚ್.ಪಿ. ಗಿರೀಶ್, ಅರ್ಚನಾ ನಿರಂಜನ್, ಸ್ಟೆಲ್ಲಾ ಮಾರ್ಟಿನ್, ನಾಜೀಮಾ, ಚಂದ್ರಿಕಾ, ಸಮೀನಾ ಕೌಸರ್, ಪ್ರತಿಭಾ, ಮಂಜುಳಾ, ಜಯಂತಿ, ರೇಖಾ, ಪುಷ್ಪಾ, ರೇಖಾ ಕೃಷ್ಣಮೂರ್ತಿ, ಆಶಾ, ಲಕ್ಷ್ಮೀ ಸೇರಿದಂತೆ ಹಲವರಿದ್ದರು.

Related posts

ಜ್ಞಾನದ ಜೊತೆಗೆ ಕೌಶಲ್ಯವಿರಲಿ-ಎ.ಎಲ್. ಚಂದ್ರಶೇಖರ್

Editor

ಪ್ರತಿ ಪದವಿಪೂರ್ವ ಕಾಲೇಜುಗಳಲ್ಲೂ ಭಾರತ ಸೇವಾದಳ ಘಟಕಗಳ ಸ್ಥಾಪನೆ-ವೈ.ಹೆಚ್. ನಾಗರಾಜ್

Editor

2024ನೇ ವರ್ಷಕ್ಕೆ ದಿನಗಣನೆ: 2023ರಲ್ಲಿ ಸಂಭವಿಸಿದ ಪ್ರಮುಖ ಘಟನೆಗಳ ಹಿನ್ನೋಟ ಜಸ್ಟ್ ಸ್ಮರಿಸೋಣ ಬನ್ನಿ…

Editor